ಚಿಕ್ಕಮಗಳೂರು

ಚಳಿಗಾಲದಲ್ಲಿ ಸ್ನಾನ ಮಾಡೋವಾಗ ಈ ನಿಯಮ ಮರೆಯ ಬೇಡಿ; ಇಲ್ಲ ಎಂದರೆ ಅಪಾಯ ತಪ್ಪಿದಲ್ಲ!

must follow these bathing rules on winter

ಹೊಸ ವರ್ಷದ ಆರಂಭದೊಂದಿಗೆ (New Year) ಚಳಿಯೂ ಹೆಚ್ಚಾಗಿದೆ. ಈ ಚಳಿಗಾಲದಲ್ಲಿ (Winter Season), ರೋಗನಿರೋಧಕ ಶಕ್ತಿಯು ತುಂಬಾ ದುರ್ಬಲಗೊಳ್ಳುತ್ತದೆ ಮತ್ತು ಉತ್ತಮ ಆರೋಗ್ಯ ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ. ಈ ಕುರಿತಂತೆ ಆಯುರ್ವೇದ ವೈದ್ಯಾಧಿಕಾರಿ (Ayurvedic doctor) ಡಾ.ರಮೇಶ್ ಚಂದ್ ಜ್ಞಾನಿ ಅವರು ಕೆಲವು ಸಲಹೆಗಳನ್ನ ನೀಡಿದ್ದಾರೆ. ಚಳಿಗಾಲದಲ್ಲಿ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು, ಈ ಅವಧಿಯಲ್ಲಿ ಹಿರಿಯರು (Senior Citizen) ಮತ್ತು ಮಕ್ಕಳ (Children) ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಚಳಿ ಹೆಚ್ಚಾಗಿದೆ ಎಂದು ಎಂದಿಗೂ ಹೆಚ್ಚು ಬಿಸಿ ನೀರು ಇರುವ ನೀರಿನಿಂದ ಸ್ನಾನ ಮಾಡಬಾರದು. ಚಳಿಗಾಲದಲ್ಲಿ ಉಗುರು ಬೆಚ್ಚನೆಯ ನೀರಿನಿಂದ ಸ್ನಾನ ಮಾಡಬೇಕು. ಸ್ನಾನಕ್ಕೆ ಹೋದಾಗ ಮೊದಲು ತಲೆಗೆ ನೀರು ಹಾಕಿಕೊಳ್ಳದೆ ಕಾಲಿಗೆ ನೀರು ಹಾಕಿ. ನೀರನ್ನು ನೇರವಾಗಿ ತಲೆಯ ಮೇಲೆ ಸುರಿಯುವುದರಿಂದ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ಇದರಿಂದ ಪಾರ್ಶ್ವವಾಯು ಬರುವ ಸಾಧ್ಯತೆಯೂ ಹೆಚ್ಚುತ್ತದೆ. ಆದ್ದರಿಂದ ಬಿಸಿ ನೀರಿನಿಂದ ಸ್ನಾನ ಮಾಡುವಾಗ ಕಾಲಿಗೆ ನೀರು ಸುರಿದು ಸ್ನಾನವನ್ನು ಪ್ರಾರಂಭಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಚಳಿಗಾಳಿ ಬೀಸುತ್ತಿದೆ. ಸ್ವಲ್ಪ ಮುನ್ನೆಚ್ಚರಿಕೆ ವಹಿಸುವ ಮೂಲಕ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳಿಂದ ದೂರ ಆಗಬಹುದು ಎಂದು ವೈದ್ಯರು ಹೇಳಿದ್ದಾರೆ.

ಚಳಿಗಾಲದಲ್ಲಿ ಹಸಿ ತರಕಾರಿಯನ್ನು ಸೇವಿಸಿ

ಚಳಿಗಾದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಹಸಿ ತರಕಾರಿಗಳನ್ನು ಸೇವಿಸಿ. ತರಕಾರಿಗಳನ್ನು ರಾಗಿ ರೊಟ್ಟಿಯೊಂದಿಗೆ ತಿನ್ನಬಹುದು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ತರಕಾರಿಯನ್ನು ನಿತ್ಯ ಸೇವಿಸಬೇಕು. ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.