ಉತ್ತರ ಕನ್ನಡ

Contractor: ದಯಾಮರಣ ಕೋರಿ ಸಿಎಂ ಸಿದ್ದರಾಮಯ್ಯಗೆ ಗುತ್ತಿಗೆದಾರ ಪತ್ರ; ಮಗಳ ಮದುವೆಗೂ ಹಣ ಇಲ್ಲ ಎಂದು ಅಳಲು!

another letter from contractor

ಬೀದರ್​ನ ಗುತ್ತಿಗೆದಾರ (contractor) ಸಚಿನ್ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು, ರಾಜ್ಯ ಸರ್ಕಾರ (State Government) ಮತ್ತು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ದಾವಣಗೆರೆಯಲ್ಲಿ (Davanagere) ಮತ್ತೊಬ್ಬ ಗುತ್ತಿಗೆದಾರರೊಬ್ಬರು ದಯಾಮರಣ (Euthanasia) ಕೋರಿ ಸಿಎಂಗೆ ಪತ್ರ ಬರೆದಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಗುತ್ತಿಗೆದಾರ ಮೊಹಮ್ಮದ್ ಮಜಹರ್, ಮಾಡಿದ ಕಾಮಗಾರಿಗೆ ಹಣ ಬಿಡುಗಡೆ ಆಗದ ಹಿನ್ನೆಲೆ ಮುಖ್ಯಮಂತ್ರಿಗೆ ಪತ್ರ ಗುತ್ತಿಗೆದಾರ ಪತ್ರ ಬರೆದಿದ್ದಾರೆ. ಮಾಡಿದ ಕಾಮಗಾರಿಗೆ ನಗರಸಭೆಯವರು ಹಣ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಬಡ್ಡಿ ಪಾವತಿಸಿ ಸಾಕಾಗಿದೆ’

ಹತ್ತಾರು ಬಾರಿ ನಗರಸಭೆಗೆ ಅಲೆದಾಡಿ ಸಂಬಂಧಿತ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಯವರಿಗೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೆ ಫಲ ಬಂದಿಲ್ಲ. ನಾನೂ ವಿವಿಧೆಡೆ ಸಾಲ ಸೂಲ ಮಾಡಿದ್ದೇನೆ, ಮೆಟೀರಿಯಲ್ ಸರಬರಾಜುದಾರರಿಗೆ ಬಡ್ಡಿ ಪಾವತಿಸಿ ಸಾಕಾಗಿದೆ ಎಂದು ಗುತ್ತೆದಾರ ಮೊಹಮ್ಮದ್ ಮಜಹರ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬೆಳೆದ ಮಗಳ ಮದುವೆ ಮಾಡಬೇಕು’

ಮನೆಯಲ್ಲಿರುವ ಬೆಳೆದ ಮಗಳ ಮದುವೆ ಮಾಡಬೇಕಿದೆ. ಈ ವ್ಯವಸ್ಥೆಯಿಂದ ಬೇಸತ್ತಿರುವ ನನಗೆ ಜೀವನದಲ್ಲಿ ಜಿಗುಪ್ಸೆ ಬಂದಿದೆ. ಹೀಗಾಗಿ ದಯಾಳುಗಳಾದ ತಾವುಗಳು ದಯಮಾಡಿ ನನಗೆ ದಯಾಮರಣಕ್ಕೆ ಅನುಮತಿಯನ್ನು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಒಟ್ಟು 25 ಲಕ್ಷ ರೂ ಬಾಕಿ

ಗುತ್ತೆದಾರ ಮೊಹಮ್ಮದ್ ಮಜಹರ್ ಹರಿಹರದ ಜೆಸಿ ಬಡಾವಣೆಯಲ್ಲಿ 5 ಲಕ್ಷ ವೆಚ್ಚದ ಸಿಸಿ ಚರಂಡಿ ಮಾಡಿದ್ದರು. ಕೈಲಾಸನಗರದ ಖಬರಸ್ತಾನ್ ಸಮೀಪ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದ್ದರು ಇದಕ್ಕೆ ಥರ್ಡ್ ಪಾರ್ಟಿ ಇನ್ಸ್​ಪೆಕ್ಷನ್ ಆಗಿ 1 ವರ್ಷ ಕಳೆದರು ಹಣ ನೀಡುತ್ತಿಲ್ಲ. ಒಟ್ಟು 25 ಲಕ್ಷ ರೂಪಾಯಿ ಹಣ ಬರಬೇಕಿದೆ ಎಂದು ತಿಳಿಸಿದ್ದಾರೆ.

You may also like

r ashok asks action against dk shivakumar
ಉತ್ತರ ಕನ್ನಡ

ಮಾರ್ಫಿಂಗ್ ವಿಡಿಯೋ ಪೋಸ್ಟ್‌ ಮಾಡಿ ಮಾನಹಾನಿ ಆರೋಪ, ಡಿಕೆಶಿ ವಿರುದ್ಧ ಕ್ರಮಕ್ಕೆ ಆರ್ ಅಶೋಕ್ ಪತ್ರ

ಬಸ್ ಟಿಕೆಟ್ ದರ (Bus Ticket Rate) ಏರಿಕೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ