ದೇಶ-ವಿದೇಶ

Plane Crash: ಸೌತ್ ಕೊರಿಯಾ, ಕೆನಡಾ ಬೆನ್ನಲ್ಲೇ ಇದೀಗ ಮತ್ತೊಂದು ವಿಮಾನ ಪತನ! 2 ಸಾವು, 18 ಮಂದಿ ಗಂಭೀರ

plain crash

ಕ್ಯಾಲಿಫೋರ್ನಿಯಾ: ದಕ್ಷಿಣ ಕೊರಿಯಾ ಮತ್ತು ಕೆನಡಾ ನಂತರ ಇದೀಗ ಅಮೆರಿಕದಲ್ಲಿ ಕೂಡ ವಿಮಾನ ದುರಂತ (Plane Crashes) ಸಂಭವಿಸಿದೆ. ಬೆರೆಳೆಣಿಕೆಯ ದಿನದ ಅಂತರದಲ್ಲಿ ಮೂರು ವಿಮಾನ ಅಪಘಾತ ಸಂಭವಿಸಿದ್ದು, ಇದೀಗ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ (Southern California) ವಿಮಾನವೊಂದು ಅಪಘಾತಕ್ಕೀಡಾಗಿದೆ.

ಮಾಹಿತಿ ಪ್ರಕಾರ,  ಹಾರಾಟದ ಸಮಯದಲ್ಲಿ ಒಂದು ಸಣ್ಣ ವಿಮಾನವು ಬೃಹತ್ ಕಟ್ಟಡದ ಮೇಲೆ ಡಿಕ್ಕಿ ಹೊಡೆದಿದ್ದು, ಪರಿಣಾಮ ವಿಮಾನ ಪತನಗೊಂಡು ಕೆಳಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪದ್ದು, 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ದುರಂತ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಮಾಹಿತಿ ಪ್ರಕಾರ,  ಹಾರಾಟದ ಸಮಯದಲ್ಲಿ ಒಂದು ಸಣ್ಣ ವಿಮಾನವು ಬೃಹತ್ ಕಟ್ಟಡದ ಮೇಲೆ ಡಿಕ್ಕಿ ಹೊಡೆದಿದ್ದು, ಪರಿಣಾಮ ವಿಮಾನ ಪತನಗೊಂಡು ಕೆಳಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪದ್ದು, 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ದುರಂತ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ವಿಮಾನವನ್ನು ಏಕ-ಎಂಜಿನ್ ವ್ಯಾನ್ RV-10 ಎಂದು ಗುರುತಿಸಿದೆ. ಮೃತಪಟ್ಟವರು ಮತ್ತು ಗಾಯಗೊಂಡವರು ವಿಮಾನದಲ್ಲಿದ್ದರೋ ಅಥವಾ ನೆಲದ ಮೇಲಿದ್ದರೋ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ವೆಲ್ಸ್ ಹೇಳಿದ್ದಾರೆ. ವಿಮಾನ ದುರಂತದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೊಡ್ಡ ಕಟ್ಟಡದ ಮೇಲ್ಭಾಗದಿಂದ ಬಿಳಿ ಹೊಗೆ ಉಕ್ಕುತ್ತಿರುವುದು ಕಂಡು ಬಂದಿದೆ

ಮೂಲಗಳ ಪ್ರಕಾರ, ಫುಲ್ಲರ್ಟನ್ ಮುನ್ಸಿಪಲ್ ಏರ್‌ಪೋರ್ಟ್ ಬಳಿ ವಿಮಾನ ಪತನಗೊಂಡಿದೆ. ಈ ವಿಮಾನ ನಿಲ್ದಾಣದಲ್ಲಿ ಒಂದು ರನ್‌ವೇ ಮತ್ತು ಒಂದು ಹೆಲಿಪ್ಯಾಡ್ ಇದೆ. ಇದು ಪ್ರಾದೇಶಿಕ ರೈಲು ಮಾರ್ಗವಾದ ಮೆಟ್ರೋಲಿಂಕ್ ಬಳಿ ಇದೆ ಮತ್ತು ವಸತಿ ಮತ್ತು ವಾಣಿಜ್ಯ ಗೋದಾಮಿನ ಕಟ್ಟಡಗಳಿಂದ ಸುತ್ತುವರಿದಿದೆ.

ಫ್ಲೈಟ್-ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್‌ಅವೇರ್ ಪ್ರಕಾರ ನಾಲ್ಕು ಆಸನಗಳ, ಸಿಂಗಲ್ ಇಂಜಿನ್ ವಿಮಾನವು ಟೇಕ್ ಆಫ್ ಆದ ಒಂದು ನಿಮಿಷದ ನಂತರ ಪತನಗೊಂಡಿದೆ. ಘಟನೆಗೆ ಸಂಬಂಧಿಸಿದ ವೀಡಿಯೋ ಕೂಡ ವೈರಲ್ ಆಗುತ್ತಿದ್ದು, ಅದರಲ್ಲಿ ವಿಮಾನದ ಅವಶೇಷಗಳು ಛಾವಣಿಯ ಮೇಲೆ ಉರಿಯುತ್ತಿರುವುದು ಕಂಡುಬಂದಿದೆ.

You may also like

china virus spread
ದೇಶ-ವಿದೇಶ

ಚೀನಾದಲ್ಲಿ HMPV ವೈರಸ್‌ ಆಕ್ರಮಣ, ಆಸ್ಪತ್ರೆಗಳಲ್ಲಿ ಜನವೋ ಜನ; ವಿಡಿಯೋಗಳಿಂದ ಸತ್ಯ ಬಹಿರಂಗ!

ನಿಮಗೆ ನೆನಪಿದೆಯೇ 2019ರ ಕೊನೆಯಲ್ಲಿ ಮತ್ತು 2020ರ ಆರಂಭದಲ್ಲಿ ನಾವು ಚೀನಾದಲ್ಲಿ (China) ಕೊರೋನಾಗೆ (Corona) ಸಂಬಂಧಿಸಿದ ಅನೇಕ ವಿಡಿಯೋಗಳನ್ನು (Video) ನೋಡಿದ್ದೇವೆ. ಆ ಸಮಯದಲ್ಲಿ, ಎಲ್ಲಾ