ದೇವರು (God) ಎಂದರೆ ಎಲ್ಲರಿಗೂ ಭಕ್ತಿ ಇರುತ್ತದೆ. ಹಾಗಾಗಿ ಕೆಲವರು ದೇವರ ಲಾಕೆಟ್ (Locket) ಅನ್ನ ತಮ್ಮ ಕುತ್ತಿಗೆಗೆ ಧರಿಸುತ್ತಾರೆ. ಆದರೆ ಜ್ಯೋತಿಷ್ಯದ (Astrology) ಪ್ರಕಾರ ಲಾಕೆಟ್ ಧರಿಸುವುದು ಒಳ್ಳೆಯದಲ್ಲ. ಹಾಗಾದ್ರೆ ಈ ಲಾಕೆಟ್ ಧರಿಸುವುದರಿಂದ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂಬುದು ಇಲ್ಲಿದೆ.
ಸಾಮಾನ್ಯವಾಗಿ ನಾವು ನಮ್ಮಿಷ್ಟದ ದೇವರ ಲಾಕೆಟ್ ಅನ್ನ ಕುತ್ತಿಗೆಯಲ್ಲಿ ಧರಿಸುತ್ತೇವೆ. ಇದರಿಂದ ದೇವರು ತಮ್ಮ ಜೊತೆ ಇದ್ದಾನೆ ಎನ್ನುವ ನಂಬಿಕೆ ಇರುತ್ತದೆ. ಆದರೆ ಧರ್ಮಗ್ರಂಥಗಳ ಪ್ರಕಾರ ಈ ವಿಚಾರದಲ್ಲಿ ಅನೇಕ ನಿಯಮಗಳಿದೆ. ಅದರಲ್ಲೂ ಕೆಲ ನಂಬಿಕೆಗಳ ಪ್ರಕಾರ ನಾವು ಯಾವುದೇ ದೇವರ ಲಾಕೆಟ್ ಅನ್ನ ಧರಿಸಬಾರದು. ಇದರಿಂದ ನಮಗೇ ಸಮಸ್ಯೆ ಆಗುತ್ತದೆ ಎನ್ನಲಾಗುತ್ತದೆ. ನಾವು ಅಪ್ಪಿ-ತಪ್ಪಿ ದೇವರ ಲಾಕೆಟ್ ವಿಚಾರದಲ್ಲಿ ಮಾಡುವ ತಪ್ಪುಗಳು ನಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆಯನ್ನ ಸೃಷ್ಟಿ ಮಾಡುವ ಸಾಧ್ಯತೆ ಇರುತ್ತದೆ.
ಅಲ್ಲದೇ, ಲಾಕೆಟ್ ಮಾತ್ರವಲ್ಲದೇ ದೇವರಿಗೆ ಸಂಬಂಧಿಸಿದ ಸರ, ಹಾರ ಅಥವಾ ದಾರವನ್ನ ನಾವು ದೇಹದ ಮೇಲೆ ಧರಿಸಬಾರದು ಎನ್ನಲಾಗುತ್ತದೆ. ಆದರೆ ಮಣಿಕಟ್ಟು ಅಥವಾ ತೋಳಿನ ಮೇಲೆ ರುದ್ರಾಕ್ಷವನ್ನು ಧರಿಸಬಹುದು ಎನ್ನುತ್ತವೆ ಧರ್ಮಗ್ರಂಥಗಳು. ಹಾಗಾದ್ರೆ ನಾವು ದೇವರ ಲಾಕೆಟ್ ವಿಚಾರದಲ್ಲಿ ಯಾವ ನಿಯಮಗಳನ್ನ ಪಾಲಿಸಬೇಕು. ಅವುಗಳನ್ನ ಧರಿಸುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮುಖ್ಯವಾಗಿ ಲಾಕೆಟ್ ಧರಿಸುವುದರಿಂದ ದೇವರ ಪ್ರಾಮುಖ್ಯತೆ ಕಡಿಮೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಅದಕ್ಕೆ ಯಾವುದೇ ಧಾರ್ಮಿಕ ಮಹತ್ವ ಇಲ್ಲ ಎಂದಲ್ಲ, ಆದರೆ ಅದನ್ನ ಕುತ್ತಿಗೆಯಲ್ಲಿ ಹಾಕಿಕೊಳ್ಳುವುದು ಒಳ್ಳೆಯದಲ್ಲ, ಇದು ನಮ್ಮ ಜೀವನದ ಮೇಲೆ ಸಹ ಪರಿಣಾಮ ಬೀರುತ್ತದೆ. ಇದರಿಂದ ನಮ್ಮ ಜೀವನದಲ್ಲಿ ಕಷ್ಟಗಳು ಬರುವ ಸಾಧ್ಯತೆ ಇದೆ. ನಾವು ಯಾವುದೇ ಕಾರಣಕ್ಕೂ ಇಷ್ಟದ ದೇವರ ಲಾಕೆಟ್ ಅನ್ನು ಕುತ್ತಿಗೆಗೆ ಧರಿಸಬಾರದು
ಜ್ಯೋತಿಷ್ಯದ ಪ್ರಕಾರ ಲಾಕೆಟ್ಗಳನ್ನು ಧರಿಸುವುದು ಒಳ್ಳೆಯದಲ್ಲ. ಇದರಿಂದ ನಮ್ಮ ಜೀವನದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಏಕೆಂದರೆ ಈ ಸಮಯದಲ್ಲಿ ನಾವು ನಮಗೆ ತಿಳಿಯದೇ ತಪ್ಪುಗಳನ್ನು ಮಾಡುತ್ತೇವೆ. ಇದರಿಂದ ಒಳ್ಳೆಯದಾಗುವುದರ ಬದಲು ಕೆಟ್ಟದ್ದಾಗುತ್ತದೆ. ನಾವು ಲಾಕೆಟ್ ಧರಿಸಿ ಅನೇಕ ಕೆಲಸಗಳನ್ನ ಮಾಡುತ್ತೇವೆ. ಆ ಕೆಲಸಗಳು ದೇವರ ಕೋಪಕ್ಕೆ ಗುರಿಯಾಗಲು ಕಾರಣವಾಗುತ್ತದೆ. ಹಾಗಾಗಿ ದೇವರ ಲಾಕೆಟ್ ಧರಿಸದಿರುವುದು ಬಹಳ ಉತ್ತಮ ಎನ್ನಲಾಗುತ್ತದೆ.
ಇನ್ನು ನಾವು ಪ್ರತಿನಿತ್ಯ ಅನೇಕ ಕೆಲಸಗಳನ್ನು ಮಾಡುತ್ತೇವೆ. ಧೂಳಿನಲ್ಲಿ ಓಡಾಡುವುದು ಅಥವಾ ಮಣ್ಣಿನ ಕೆಲಸ ಹೀಗೆ ಏನೇನೋ ಮಾಡುತ್ತೇವೆ. ಈ ಎಲ್ಲಾ ಕಾರಣಗಳಿಂದ ಎಲ್ಲಾ ಸಮಯದಲ್ಲಿ ನಾವು ಸ್ವಚ್ಛತೆಯನ್ನ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾವು ಲಾಕೆಟ್ ಧರಿಸಬಾರದು ಎನ್ನಲಾಗುತ್ತದೆ. ಇದರಿಂದ ದೇವರ ಲಾಕೆಟ್ ಸಹ ಕೊಳೆಯಾಗುವುದರಿಂದ ಒಳ್ಳೆಯದಲ್ಲ ಎನ್ನುವ ನಂಬಿಕೆ ಇದೆ.
ಮುಖ್ಯವಾಗಿ ನಾವು ಸ್ವಚ್ಛತೆಯನ್ನ ಕಾಪಾಡಿಕೊಳ್ಳದೇ ಲಾಕೆಟ್ಗಳನ್ನು ಧರಿಸಿದರೆ ಅನೇಕ ಗ್ರಹಗಳ ಕೋಪಕ್ಕೆ ಗುರಿಯಾಗುತ್ತೇವೆ. ಇದರಿಂದ ಗ್ರಹದೋಷವನ್ನ ಅನುಭವಿಸಬೇಕಾಗುತ್ತದೆ. ಒಮ್ಮೆ ಗ್ರಹದೋಷ ಬಂದರೆ ಅದರಿಂದ ಜೀವನದಲ್ಲಿ ಸಾಲಾಗಿ ತೊಂದರೆಗಳು ಬರುತ್ತದೆ. ಹಣಕಾಸಿನ ಸಮಸ್ಯೆ, ಮಾನಸಿಕ ತೊಂದರೆ ಜೊತೆಗೆ ವೈವಾಹಿಕ ಜೀವನದಲ್ಲಿ ಸಹ ಕಷ್ಟಗಳು ಬರಬಹುದು. ಹಾಗಾಗಿ ನೀವು ಲಾಕೆಟ್ ಧರಿಸದೇ ಇದ್ದರೆ ಬಹಳ ಒಳ್ಳೆಯದಾಗುತ್ತದೆ
ಆದರೆ ಯಾವುದಾದರೂ ಜ್ಯೋತಿಷಿಗಳು ಅಥವಾ ಪಂಡಿತರ ಸಲಹೆ ಮೇರೆಗೆ ಲಾಕೆಟ್ ಧರಿಸಿದರೆ ಸಮಸ್ಯೆ ಆಗುವುದಿಲ್ಲ ಎನ್ನಲಾಗುತ್ತದೆ. ಆದರೆ ನೀವೇ ಇಷ್ಟ ಎಂದು ಧರಿಸಲು ಹೋಗಬೇಡಿ. ಆಕಸ್ಮಿಕವಾಗಿ ನೀವು ಇಷ್ಟದ ದೇವರ ಲಾಕೆಟ್ ಧರಿಸಿದರೆ ನಿಮ್ಮ ಜೀವನದಲ್ಲಿ ಕಷ್ಟಗಳನ್ನ ನೀವೇ ತಂದುಕೊಂಡಂತೆ ಆಗುತ್ತದೆ