ಮಗುವಿನ (Chilndren) ಬೆಳವಣಿಗೆ ಎಂಬುದು ಒಂದು ಅಸಾಮಾನ್ಯ ಪ್ರಕ್ರಿಯೆಯಾಗಿದ್ದು, ಮಕ್ಕಳ ಹಂತ ಹಂತದ ಬೆಳವಣಿಗೆಯನ್ನು ಪೋಷಕರು (Parents), ಗುರುಗಳು, ಆರೈಕೆದಾರರು ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ. ಮಕ್ಕಳು ಇಂತಿಷ್ಟು ವರ್ಷದಲ್ಲಿ ಹೀಗೆ ಕೆಲಸ ಮಾಡುತ್ತಾರೆ ಎಂದು ಯೋಚಿಸಿಕೊಂಡು ಅವರ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದು ಅಧ್ಯಯನ ಹೇಳುತ್ತದೆ.
ಬೆಳವಣಿಗೆಯ ಹಂತ ಎಲ್ಲಾ ಮಕ್ಕಳಿಗೂ ಸಮನಾಗಿರುವುದಿಲ್ಲ
ಉಹಾರಣೆಗೆ ಮಗುವು ಮೂರು ತಿಂಗಳೊಳಗೆ ತನ್ನವರನ್ನು ಗುರುತಿಸಲು ಆರಂಭಿಸುತ್ತದೆ, ಆರು ತಿಂಗಳೊಳಗೆ ಅಂಬೆಗಾಲಿಡಲು ಮಗ್ಗಲು ಬದಲಿಸಲು ಆರಂಭಿಸುತ್ತದೆ, ಇನ್ನು ಹತ್ತು ತಿಂಗಳ ಸಮಯದಲ್ಲಿ ಹಿಡಿದು ನಿಂತು ನಿಧಾನಕ್ಕೆ ನಡೆಯಲಾರಂಭಿಸುತ್ತದೆ.
ಆದರೆ ಈ ಎಲ್ಲಾ ಹಂತಗಳು ಎಲ್ಲಾ ಮಕ್ಕಳಿಗೆ ಸಮನಾಗಿರುವುದಿಲ್ಲ. ಕೆಲವರು ವೇಗವಾಗಿ ಈ ಕ್ರಿಯೆಗಳನ್ನು ನಡೆಸಿದರೆ ಇನ್ನು ಕೆಲವು ಮಕ್ಕಳು ನಿಧಾನವಾಗಿ ಪ್ರಕ್ರಿಯೆ ನಡೆಸುತ್ತಾರೆ.
ಹೀಗಾಗಿ ಮಕ್ಕಳು ಇಂತಿಷ್ಟು ವರ್ಷದಲ್ಲಿ ಹೀಗೆಯೇ ಇರುತ್ತಾರೆ, ಇಂತಹದ್ದೇ ಚಟುವಟಿಕೆಗಳನ್ನು ನಡೆಸುತ್ತಾರೆ ಎಂಬುದನ್ನು ತೀರ್ಮಾನಿಸಲಾಗುವುದಿಲ್ಲ.
ಪಾಶ್ಚಿಮಾತ್ಯ ದೇಶಗಳ ಮಾಹಿತಿ
ಮಕ್ಕಳ ಅಭಿವೃದ್ಧಿಯ ಕುರಿತ ಹೆಚ್ಚಿನ ಸಂಶೋಧನೆಗಳನ್ನು ಪಾಶ್ಚಿಮಾತ್ಯ ದೇಶಗಳಾದ ಯುಎಸ್, ಯುಕೆ, ನೆದರ್ಲ್ಯಾಂಡ್ಸ್, ಜರ್ಮನಿ ಮತ್ತು ಫ್ರಾನ್ಸ್ ಕೈಗೊಂಡಿವೆ.
ಈ ದೇಶಗಳು ತಮ್ಮ ದೇಶಗಳ ಮಕ್ಕಳ ಪ್ರಗತಿಯನ್ನು ಗುರುತಿಸಿ ಅದರ ಮೇಲೆ ಸಂಶೋಧನೆ ನಡೆಸಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಕ್ಕಳ ಬೆಳವಣಿಗೆಯ ಕುರಿತು ಮೂಲಭೂತ ಸಂಶೋಧನೆಯನ್ನು ಮಾಡುವುದು ಸವಾಲಿನ ಸಂಗತಿಯಾಗಿದೆ.