ಪ್ರತಿ ದಿನ ನಾವು ಅನೇಕ ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಭೇಟಿ ಮಾಡುತ್ತೇವೆ ಮತ್ತು ಎಲ್ಲರೊಡನೆ ಚೆನ್ನಾಗಿಯೇ ಇರಲು ಬಯಸುತ್ತೇವೆ ಮತ್ತು ಅದಕ್ಕಾಗಿ ನಾವು ಮತ್ತು ಅವರು ಸಹ ಪ್ರಯತ್ನ ಪಡುತ್ತಿರುತ್ತಾರೆ.
ಆದರೆ ನಿಜವಾಗಿಯೂ ನಾವು ಇಷ್ಟಪಡುವ ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಯಾವ ರೀತಿಯಾದ ಅನಿಸಿಕೆ ಇದೆ ಅಂತ ತಿಳಿದುಕೊಳ್ಳುವುದು ತುಂಬಾನೇ ಕಷ್ಟದ ಕೆಲಸ. ಏಕೆಂದರೆ ಈಗಂತೂ ಜನರು ನಿಮ್ಮನ್ನು ಕಂಡರೆ ಹೊಟ್ಟೆಕಿಚ್ಚು, ಅಸೂಯೆ ಇದ್ದರೂ ಸಹ ಅದನ್ನು ಎದುರಿಗೆ ತೋರಿಸಿಕೊಳ್ಳುವುದಿಲ್ಲ
ಯಾರೂ ಸಹ ನಿಮ್ಮನ್ನು ಕಂಡರೆ ನನಗೆ ಸ್ವಲ್ಪವೂ ಇಷ್ಟ ಆಗುವುದಿಲ್ಲ ಅಂತ ನೇರವಾಗಿ ಹೇಳುವುದಿಲ್ಲ. ಅನೇಕರು ಅದನ್ನು ಅವರ ದೇಹ ಭಾಷೆಗಳಿಂದ ಕೆಲವೊಮ್ಮೆ ವ್ಯಕ್ತಪಡಿಸುತ್ತಾರೆ. ಅವುಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಅರ್ಥವಾಗುತ್ತದೆ. ಮಾತಾಡುವ ಪದಗಳು ಸಂವಹನದ ಮೇಲ್ಮೈ ಪದರವಾಗಿದ್ದರೆ, ಮನಸ್ಸಿನಾಳದ ಭಾವನೆಗಳು ಮತ್ತು ಆಲೋಚನೆಗಳನ್ನು ಅಷ್ಟಾಗಿ ಮುಕ್ತವಾಗಿ ತೋರಿಸುವುದಿಲ್ಲ.
ದೇಹ ಭಾಷೆಗಳು ಎಂದರೆ ಮಾತಾಡುವಾಗ ಇಷ್ಟವಿರದೆ ಕಣ್ಣಿನ ಸಂಪರ್ಕವನ್ನು ತಪ್ಪಿಸುವುದು, ದೂರವನ್ನು ಕಾಯ್ದುಕೊಳ್ಳಲು ನೋಡುವುದು, ಪಾದಗಳನ್ನು ಅವರ ಪಾದಗಳಿಂದ ದೂರವಿಡುವುದು ಹೀಗೆ ಅನೇಕ ರೀತಿಯ ದೇಹ ಭಾಷೆಯ ಸನ್ನೆಗಳನ್ನು ಅವರು ತೋರಿಸುತ್ತಾರೆ. ಅವುಗಳನ್ನು ನಿಜವಾಗಿಯೂ ಗಮನಿಸುವುದರಿಂದ ನಮ್ಮ ಎದುರಿಗಿರುವ ವ್ಯಕ್ತಿ ನಮ್ಮ ಬಗ್ಗೆ ಎಂತಹ ಭಾವನೆಯನ್ನು ಹೊಂದಿದ್ದಾರೆ ಅನ್ನೋದು ಸ್ಪಷ್ಟವಾಗಿ ಅರ್ಥವಾಗುತ್ತದೆ.
ಈ 5 ದೇಹ ಭಾಷೆಯ ಚಿಹ್ನೆಗಳು ನಿಮ್ಮನ್ನು ಇಷ್ಟಪಡದಿರುವ ಸಂಕೇತಗಳಾಗಿರಬಹುದು..
ತಮ್ಮ ಇನ್ಸ್ಟಾಗ್ರಾಮ್ ಬಯೋ ಪ್ರಕಾರ ಮನಶ್ಶಾಸ್ತ್ರಜ್ಞ ಫ್ರಾನ್ಸೆಸ್ಕಾ ಟಿಘಿನಿಯನ್ ಅವರು ವೀಡಿಯೋದಲ್ಲಿ ಈ ಐದು ದೇಹ ಭಾಷೆಗಳ ಬಗ್ಗೆ ವಿವರವಾಗಿ ಹಂಚಿಕೊಂಡಿದ್ದಾರೆ ನೋಡಿ.
ಕಣ್ಣಿನ ಸಂಪರ್ಕವನ್ನು ತಪ್ಪಿಸುತ್ತಾರೆ: ನಿಮ್ಮನ್ನು ನಿಜವಾಗಿಯೂ ಇಷ್ಟಪಡದಿರುವ ಜನರು ನಿಮ್ಮೊಡನೆ ಮಾತಾಡುವಾಗ ಆಳವಾದ ಕಣ್ಣಿನ ಸಂಪರ್ಕವನ್ನು ತಪ್ಪಿಸುತ್ತಾರೆ ಮತ್ತು ಇದು ಸಂಭಾಷಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂದು ಇದು ಸೂಚಿಸಬಹುದು.
ತುಟಿಗಳನ್ನು ಒತ್ತಿಕೊಳ್ಳುವುದು: ನಿಮ್ಮೊಡನೆ ಮಾತಾಡಲು ಇಷ್ಟಪಡದೆ ಇರುವ ಜನರು ನಿಮ್ಮೊಡನೆ ಮಾತಾಡುವಾಗ ಅವರು ತಮ್ಮ ತುಟಿಗಳನ್ನು ಒತ್ತಿಕೊಳ್ಳುತ್ತಾರೆ. ಈ ಸನ್ನೆ ಅವರಿಗೆ ನಿಮ್ಮೊಡನೆ ಮಾತಾಡುವಾಗ ಆಗುವ ಕಿರಿಕಿರಿ, ಒತ್ತಡ ಅಥವಾ ಅಸಮ್ಮತಿಯ ಅಮೌಖಿಕ ಸೂಚನೆಯಾಗಿರುತ್ತದೆ.