ಬೀದರ್ನಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ (Sachin Suicide) ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಅವರು ಡೆತ್ ನೋಟ್ನಲ್ಲಿ (Death Note) ಪ್ರಿಯಾಂಕ್ ಖರ್ಗೆ (Priyank Kharge) ಆಪ್ತ ರಾಜು ಕಪನೂರು (Raju Kapanooru) ಹೆಸರನ್ನು ಉಲ್ಲೇಖಿಸಿದ್ದಾರೆ. ಇದಾದ ಬಳಿಕ ಬಿಜೆಪಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ (BJP) ಆಗ್ರಹಿಸುತ್ತಿದ್ದಾರೆ. ಈ ನಡುವೆ ಮೃತ ಸಚಿನ್ ಪಾಂಚಾಳ್ ಅವರ ಸಹೋದರಿ ಸಚಿವ ಪ್ರಿಯಾಂಕ್ ಖರ್ಗೆ ಕಡೆಯಯವರು ಮನೆಗೆ ಬಂದಿದ್ದರು ಎಂದು ಹೇಳಿದರು.
ಚುರುಕುಗೊಂಡ ಸಿಐಡಿ ತನಿಖೆ
ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕುಗೊಂಡಿದೆ. ಎರಡನೇ ದಿನದ ಸಿಐಡಿ ತನಿಖೆ ಬಳಿಕ ಮೃತ ಸಚಿನ್ ಸುರೇಖಾ ಮಾತನಾಡಿ, ನಿನ್ನೆ ಕೊಟ್ಟಿರುವ ಸ್ಟೇಟ್ಮೆಂಟ್ನ್ನೇ ಓದಿಸಿ ಕರೆಕ್ಷನ್ ಮಾಡಿದ್ದಾರೆ. ಸ್ಟೇಟ್ಮೆಂಟ್ ಸರಿಯಾಗಿ ಇದೆಯೋ ಇಲ್ವೋ ಎಂಬುವುದನ್ನ ನೋಡ್ಕೊಂಡು ಸಹಿ ಮಾಡಿಸಿಕೊಂಡು ಹೋಗಿದ್ದಾರೆ. ಸಚಿನ್ ನಾಪತ್ತೆ, ರಾಜು ಕಪನೂರು ಮನೆಗೆ ಭೇಟಿ, ಬೆದರಿಕೆ ಹಾಕಿರುವ ಬಗ್ಗೆ, ಫೋನ್ ಕಾಲ್ ಸೇರಿದಂತೆ ಘಟನೆ ಆದಾಗಿನಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.
ಪ್ರಿಯಾಂಕ್ ಖರ್ಗೆ ಪರಿಚಯಸ್ಥರು ನಿನ್ನೆ ಮನೆಗೆ ಬಂದಿದ್ರು!
ನಾಳೆ ಕಲಬುರಗಿಗೆ ಹೋಗ್ತೀವಿ, ತನಿಖೆ ಮಾಡ್ತೀವಿ ಅಂತಾ ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಪರಿಚಯಸ್ಥರು ನಿನ್ನೆ ಮನೆಗೆ ಬಂದಿದ್ರು, ಸಿಐಡಿ ತನಿಖೆಯ ಬಗ್ಗೆ ಭರವಸೆ ಇದೆಯಾ ಎನ್ನುವ ಬಗ್ಗೆ ಕೇಳಿದ್ರು, ನಾವು ಕಾದು ನೋಡ್ತೇವೆ ಅಂತಾ ಹೇಳಿದ್ದೇವೆ. ನಾವು ಏನು ಕೇಳಲಿಲ್ಲ, ನಾವು ಪ್ರಿಯಾಂಕ್ ಖರ್ಗೆ ಕಡೆಯವ್ರು ಅಂತಾ ಹೇಳಿದ್ರು, ಪೊಲೀಸರಿಂದಲೇ ಹಿಂಗಾಯ್ತು ಅಂತಾ ಹೇಳಿದ್ರು. ಸರ್ (ಪ್ರಿಯಾಂಕ್ ಖರ್ಗೆ)ಮುಂದಿನ ವಾರ ಬರಬೇಕು ಅಂದುಕೊಂಡಿದ್ದಾರೆ, ಈಗ ಸ್ವಲ್ಪ ಕೆಲಸ ಇದೆಯಂತೆ ಎಂದರು.