Sheik Haseena: ಅಂದು ಧಗ ಧಗ ಹೊತ್ತಿ ಉರಿದಿದ್ದ ಇಡೀ ಬಾಂಗ್ಲಾದೇಶ! ಶೇಖ್ ಹಸೀನಾ ಮಾಡಿದ್ದ ಸಾಲು ಸಾಲು ತಪ್ಪುಗಳೇನು?

ಢಾಕಾ: 15 ವರ್ಷ ಕಾಲ ಸುದೀರ್ಘವಾಗಿ ಬಾಂಗ್ಲಾದೇಶದ ಪ್ರಧಾನಿಯಾಗಿ (Bangladesh Prime Minister) ಆಡಳಿತ ನಡೆಸಿದ್ದ ಶೇಖ್​ ಹಸೀನಾಗೆ (Sheik Haseena)ಮರಣದಂಡನೆ ವಿಧಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ ನಡೆದ ಹಿಂಸಾಚಾರ ಸಂಬಂಧಿಸಿದಂತೆ ಮಾನವೀಯತೆಯ ವಿರುದ್ಧದ (Crimes against Humanity)) ಅಪರಾಧ ಅಡಿಯಲ್ಲಿ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್​ ಹಸೀನಾಗೆ ಗಲ್ಲು ಶಿಕ್ಷೆ (Death Sentence) ವಿಧಿಸಲಾಗಿದೆ.

 ಶೇಖ್​ ಹಸೀನಾ ಮಾಡಿದ್ದ ತಪ್ಪುಗಳೇನು?

ಕಳೆದ ವರ್ಷ ಜುಲೈನಲ್ಲಿ ಬಾಂಗ್ಲಾದೇಶದ ಇತಿಹಾಸದಲ್ಲೇ ಎಂದೂ ಕಂಡು ಕೇಳಿರದ ದೊಡ್ಡ ಹಿಂಸಾಚಾರ ನಡೆದಿತ್ತು. ಜುಲೈ ತಿಂಗಳ ಆರಂಭದಲ್ಲಿ ವಿದ್ಯಾರ್ಥಿಗಳು ಉದ್ಯೋಗ ಮೀಸಲಾತಿ ರದ್ಧುಗೊಳಿಸುವಂತೆ ಪಟ್ಟು ಹಿಡಿದು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಮೊದಲು ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನ ಹತ್ತಿಕ್ಕಲು ಶೇಖ್​ ಹಸೀನಾ ಸರ್ಕಾರ ಆದೇಶ ನೀಡಿದರು. ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದರು. ನಂತರ ಪ್ರತಿಭಟನೆ ಹಿಂಸಾಚಾರ ರೂಪ ಪಡೆದಿತ್ತು. ಬಳಿಕ ಸರ್ಕಾರ ದೇಶದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯ ಮುಚ್ಚಿಸಿ ಇಂಟರ್​ನೆಟ್​ ಸೇವೆಯನ್ನ ಸ್ಥಗಿತಗೊಳಿಸಿತ್ತು. ಇದು ಪ್ರತಿಭಟನಕಾರರನ್ನ ಕೆರಳಿ ಕೆಂಡವಾಗುವಂತೆ ಮಾಡಿತ್ತು. ಇದು ದೇಶಾದ್ಯಂತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.

Leave a Reply

Your email address will not be published. Required fields are marked *