Online Scam: ಐಟಿ ಉದ್ಯೋಗಿಗೆ ಬರೋಬ್ಬರಿ ₹310000000 ವಂಚನೆ: ಬೆಚ್ಚಿ ಬೀಳುವಂತಿದೆ ಸೈಬರ್​ ಕ್ರಿಮಿಗಳ ಪ್ಲಾನ್​!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ನಡೆದಿದೆ. ಇಂದಿರಾನಗರ ನಿವಾಸಿಯೊಬ್ಬರಾದ ಐಟಿ ಕ್ಷೇತ್ರದ ಹಿರಿಯ ಉದ್ಯೋಗಿ ಮಹಿಳೆಗೆ ಸೈಬರ್ ವಂಚಕರು ಬರೋಬ್ಬರಿ 31 ಕೋಟಿ ರೂಪಾಯಿ ವಂಚಿಸಿದ್ದಾರೆ. 180ಕ್ಕೂ ಹೆಚ್ಚು ಬ್ಯಾಂಕ್ ಟ್ರಾನ್ಸ್‌ಆಕ್ಷನ್‌ಗಳ ಮೂಲಕ ನಡೆದ ಈ ಲೂಟಿ ಬಗ್ಗೆ ಪೂರ್ವ ವಿಭಾಗ ಸೈಬರ್ ಆರ್ಥಿಕ ಮತ್ತು ನಾರ್ಕೋಟಿಕ್ಸ್ (ಸೆನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಬರ್​ ಖದೀಮರು ಬರೋಬ್ಬರಿ ₹31ಕೋಟಿ ವಂಚನೆ ಮಾಡಿದ್ದಾರೆ. ಈ ಬಗ್ಗೆ ಪೂರ್ವ ವಿಭಾಗ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಸೈಬರ್ ಮೋಸದ ಹೊಸ ಆಯಾಮವನ್ನು ತೋರಿಸುತ್ತದೆ.

Leave a Reply

Your email address will not be published. Required fields are marked *