ಬೆಂಗಳೂರು: ರಾಜ್ಯ ರಾಜಕೀಯದಲ್ಲಿ(State Politics) ಮತ್ತೆ ಕುರ್ಚಿ ಫೈಟ್ ಮುಂದಡಿ ಇಟ್ಟಂತಾಗಿದೆ. ಕೆಪಿಸಿಸಿ ಅಧ್ಯಕ್ಷ (KPCC President) ಸ್ಥಾನಕ್ಕೆ ಬಿರುಕು ಬಿಟ್ಟಿರುವ ಚರ್ಚೆಗಳು ಮತ್ತೆ ಗರಿಗೆದರಿರುವಾಗ, ಡಿಕೆ ಶಿವಕುಮಾರ (Dk Shivakumar) ನೀಡಿದ ಒಂದು ಹೇಳಿಕೆ ಕಾಂಗ್ರೆಸ್ನ ತುಂಬಿದ ಮನೆಯೊಳಗೆ ಒಳಬೇಗುದಿ ಸೃಷ್ಟಿಸಿದೆ. ಒಂದೆಡೆ ಸಂಪುಟ ಸರ್ಜರಿ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಯಲೂ ಅಸ್ತು ಎಂದಿದೆ. ಈ ನಡುವೆ ಡಿಕೆ ಬಳಿ ಎರಡೂ ಭಾರೀ ಖಾತೆಗಳಿದ್ದು, ಅದರ ನಡುವೆ ಕೆಪಿಸಿಸಿ ಅಧ್ಯಕ್ಷಸ್ಥಾನ ನಿರ್ವಹಿಸುವುದು, ಹೊರೆಯಾಗುತ್ತದೆ, ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು ಎಂದು ರಾಷ್ಟ್ರೀಯ ನಾಯಕರ ಬಳಿ ಅಳಲು ತೋಡಿ ಕೋಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಗಟ್ಟಿ ನಿಲುವು ತಾಳಿದ್ದಾರೆ. ಆದರೆ ಕೆಪಿಸಿಸಿ ಸ್ಥಾನಕ್ಕೆ ಹಠ ಹಿಡಿದ ಈಶ್ವರ ಖಂಡ್ರೆ (Iswar Khandre) ಹಾಗೂ ಸತೀಶ್ ಜಾರಕಿಹೊಳಿ (Satish Jarkiholi) ಕಥೆ ಏನು ಎನ್ನುವ ವಿಷಯ ಕೂತಹಲಕ್ಕೆ ನಾಂದಿ ಹಾಡಿದೆ.

ಡಿಕೆ ಹೇಳಿದ್ದೇನು?
ನಾನು ಕೆಪಿಸಿಸಿ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ, ನಾನು ಫಿಟ್ ಅಂಡ್ ಫೈನ್, ಎಂದು ಡಿಕೆಶಿ ಸ್ಪಷ್ಟವಾಗಿ ಹೇಳುವ ಮೂಲಕ, ತನ್ನ ಸ್ಥಾನವನ್ನು ಬಿಟ್ಟುಕೊಡುವ ಯಾವುದೇ ಪ್ರಶ್ನೆಯಿಲ್ಲ ಎಂಬ ಸಂದೇಶವನ್ನು ನೇರವಾಗಿ ರವಾನಿಸಿದ್ದಾರೆ. ಈ ಹೇಳಿಕೆಯೊಳಗಿನ ಅರ್ಥ ರಾಜಕೀಯ ವಲಯದಲ್ಲಿ ಈಗ ದೊಡ್ಡ ಕೋಲಾಹಲವನ್ನೇ ಎಬ್ಬಿಸಿದೆ. ಒಂದೆಡೆ ದೊಡ್ಡ ಮಟ್ಟದ ಸಂಪುಟ ಪುನಾರಚನೆ ಮಾತು ಕೇಳಿಬರುತ್ತಿದೆ. ಡಿಕೆಶಿಯ ಬೆಂಬಲಿಗರು ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರತಿನಿಧಿತ್ವ ಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಇನ್ನೊಂದೆಡೆ, ಡಿಕೆಶಿ ಪಕ್ಷದ ಸಂಘಟನೆ ವಲಯದಲ್ಲೂ ತನ್ನ ಹಿಡಿತ ಬಿಗಿಗೊಳಿಸುತ್ತಿದ್ದಾರೆ.
