ಬೆಂಗಳೂರು: ಒಂದು ವೇಳೆ ನಾಳೆ ನಿಮ್ಮ ಮೊಬೈಲ್ (Mobile) ಬಸ್ಸಲ್ಲೋ, ಸಂತೆಯಲ್ಲೋ, ಜಾತ್ರೆಯಲ್ಲೋ ಮತ್ತೆಲ್ಲೋ ಕಳೀತು ಅನ್ಕೊಳಿ ಆಗ ನೀವು ಮಾಡೋ ಮೊದಲು ಕೆಲ್ಸ (Work) ಏನು? ಪೊಲೀಸ್ ಸ್ಟೇಶನ್ ಗೆ ಹೋಗೋದಾ? ಹಾಗಾದರೆ ಈ ತಂತ್ರಾಂಶದ (Website) ಬಗ್ಗೆ ನೀವು ತಿಳಿದುಕೊಳ್ಳಲೇಬೇಕು! ಹೌದಾ? ಯಾವ್ದು ಆ ತಂತ್ರಾಂಶ? ಅದರಿಂದ ಏನು ಉಪಯೋಗ? ಅಂತೀರಾ? ಇಲ್ಲಿದೆ ಕಂಪ್ಲೀಟ್ ಡಿಟೈಲ್
ನಿಮ್ಮ ಮೊಬೈಲ್ ಕಳೆದು ಹೋದಾಗ ಮಾಡಬೇಕಾದದ್ದು ಇದು

ನಿಮ್ಮ ಮೊಬೈಲ್ ಕಳೆದು ಹೋದಾಗ ನಿಮ್ಮ ಜೊತೆಗಿದ್ದವರ ಮೊಬೈಲ್ ಅಥವಾ ಸೈಬರ್ ಸೆಂಟರ್ ಗೆ ಹೋಗಿ ಮೊದಲು ಈ ತಂತ್ರಾಂಶದ ಸರ್ಚ್ ಮಾಡಿ. ಇದು ಕರ್ನಾಟಕ ಪೊಲೀಸ್ ಇಲಾಖೆ ಅಧಿಕೃತವಾಗಿ ಹ್ಯಾಂಡಲ್ ಮಾಡುವ app ಇದರ ಹೆಸರು ಕೆ ಎಸ್ ಪಿ ಎಂದು, ಇದರಲ್ಲಿ ಹಲವು ಆಯ್ಕೆಗಳಿವೆ. ಅದರಲ್ಲೂ ಮುಖ್ಯವಾಗಿ ಎಮರ್ಜೆನ್ಸಿ ಹಾಗೂ ನಾನ್-ಎಮರ್ಜೆನ್ಸಿ ವಿಭಾಗ ಇದೆಯಲ್ಲಾ ಅದರಲ್ಲಿ ನಾನ್-ಎಮರ್ಜನ್ಸಿ ಭಾಗಕ್ಕೆ ಹೋಗಿ ಘಟನೆಯ ಸಂಪೂರ್ಣ ವಿವರ ಹಾಕಿ ಅಪ್ಲೊಡ್ ಮಾಡಿದ ತಕ್ಷಣ ದೂರು ಆನ್ ಲೈನ್ ನಲ್ಲಿಯೇ ನೋಂದಣಿ ಆಗುತ್ತದೆ.
