ಬೆಂಗಳೂರು (ನ.20): ಬಾರ್ ನಿರ್ಮಾಣಕ್ಕೆ (Bar Construction) ದೇವಸ್ಥಾನ ಅಡ್ಡಿಯಾಗ್ತಿದೆ ಎನ್ನುವ ಕಾರಣಕ್ಕೆ ರಾತ್ರೋ ರಾತ್ರಿ ದೇವಸ್ಥಾನವನ್ನ ಕೆಡವಿದ ಘಟನೆ ಬೆಂಗಳೂರು (Bengaluru) ಹೊರವಲಯದ ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ನಡೆದಿದೆ. ನಿನ್ನೆ ಸಂಜೆ ಇದ್ದ ದೇವಸ್ಥಾನ (Temple) ಬೆಳಗ್ಗೆಯಾಗೋ ವೇಳೆಗೆ ನೆಲಸಮಗೊಂಡಿದೆ. ದೇವಸ್ಥಾನ ಕೆಡವಂತಹ ಕೆಲಸ ಮಾಡಿದ್ಯಾರು?

ಬಾರ್ ನಿರ್ಮಾಣಕ್ಕೆ ಅರ್ಜಿ, ಆಡಳಿತ ಮಂಡಳಿ ವಿರೋಧ
ಕೆಲ ಸ್ಥಳೀಯರು ಕಳೆದ ಕೆಲ ದಿನಗಳ ಹಿಂದೆ ದೇವಸ್ಥಾನದ ಸಮೀಪದಲ್ಲೇ ಬಾರ್ ನಿರ್ಮಾಣ ಮಾಡಲು ಮುಂದಾಗಿದ್ದರಂತೆ. ಹೀಗಾಗಿ ಅಬಕಾರಿ ಇಲಾಖೆಗೆ ಅರ್ಜಿ ಅನುಮತಿ ಕೋರಿ ಅರ್ಜಿ ಕೂಡ ಸಲ್ಲಿಸಿದ್ದರು. ಬಾರ್ ಸ್ಥಾಪನೆ ವಿಷಯ ತಿಳಿದ ಬಳಿಕ ದೇವಸ್ಥಾನದ ಆಡಳಿತ ಮಂಡಳಿಯವರು ಅನುಮತಿ ನೀಡದಂತೆ ಅಬಕಾರಿ ಇಲಾಖೆ ಪತ್ರ ಬರೆದಿದ್ದರಂತೆ.
ಕಿಡಿಗೇಡಿಗಳಿಂದ ದೇಗುಲ ಧ್ವಂಸ
ಈ ಸ್ಥಳದ ಸಮೀಪವೇ ಆಂಜನೇಯನ ದೇಗುಲವಿದೆ. ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಅನೇಕ ಭಕ್ತರು ದೇಗುಲಕ್ಕೆ ಬರ್ತಾರೆ ಬಾರ್ ನಿರ್ಮಾಣ ಮಾಡಿದ್ರೆ ತೊಂದರೆಯಾಗುತ್ತೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪತ್ರ ಬರೆದಿತ್ತು. ಇದ್ರಿಂದ ಕೋಪಗೊಂಡ ಕಿಡಿಗೇಡಿಗಳು ರಾತ್ರೋ ರಾತ್ರಿ ದೇಗುಲವನ್ನೇ ಕೆಡವಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
