Elephant Rescue Operation: ಕೆನಾಲ್​ಗೆ ಬಿದ್ದು 3 ರಾತ್ರಿ ಕಳೆದ ಗಜರಾಜ; ಅಂತೂ ಶುರುವಾಯ್ತು ಕಾಡಾನೆ ಮೇಲೆತ್ತುವ ಕಾರ್ಯ

ಆನೆ ಮೇಲೆತ್ತುವ ಕಾರ್ಯಾಚರಣೆ ಶುರುವಾಗಿದ್ದು, ಪಶು ವೈದ್ಯರಾದ ಡಾ ರಮೇಶ್, ಮತ್ತು ಡಾ ಆದರ್ಶ್ ರಿಂದ ಆನೆಗೆ ಅರವಳಿಕೆ ಮದ್ದು ನೀಡಲಾಗಿದೆ. ಆನೆಯನ್ನು ರಕ್ಷಣೆ ಮಾಡಲು ಕೆನಾಲ್​ಗೆ  ಸಿಬ್ಬಂದಿಗಳು ಕಂಟೇನರ್​ ಇಳಿಸಿದ್ದಾರೆ.

ಮಂಡ್ಯ (ನ.18): ಶಿವನಸಮುದ್ರ ಸಮೀಪದ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕೆನಾಲ್​ ಕಾಡಾನೆ ಬಿದ್ದಿದ್ದು, ಆನೆಯನ್ನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೆನಾಲ್‌ನಿಂದ ಆನೆಯನ್ನು ಮೇಲೆತ್ತಲು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ವೈದ್ಯರು ಆನೆಗೆ ಅರವಳಿಕೆ ಮದ್ದು ನೀಡಿದ
ಕಾಲುವೆಯಲ್ಲಿರೋ ಆನೆಗೆ ಅರವಳಿಕೆ

ಆನೆ ಮೇಲೆತ್ತುವ ಕಾರ್ಯಾಚರಣೆ ಶುರುವಾಗಿದ್ದು, ಪಶು ವೈದ್ಯರಾದ ಡಾ ರಮೇಶ್, ಮತ್ತು ಡಾ ಆದರ್ಶ್ ರಿಂದ ಆನೆಗೆ ಅರವಳಿಕೆ ಮದ್ದು ನೀಡಲಾಗಿದೆ. ಆನೆಯನ್ನು ರಕ್ಷಣೆ ಮಾಡಲು ಕೆನಾಲ್​ಗೆ  ಸಿಬ್ಬಂದಿಗಳು ಕಂಟೇನರ್​ ಇಳಿಸಿದ್ದಾರೆ.
ಕೆನಾಲ್​ಗೆ ಕಂಟೇನರ್ ಇಳಿಸಿದ ಸಿಬ್ಬಂದಿ

ಹೈಡ್ರಾಲಿಕ್ ಕ್ರೇನ್ ಮೂಲಕ ಕೆನಾಲ್​ಗೆ ಸಿಬ್ಬಂದಿಗಳು ಕಂಟೇನರ್ ಇಳಿಸಲಾಗಿದೆ. ಸ್ಥಳದ ಸಮೀಪ ಪಟಾಕಿ ಸಿಡಿಸುವ ಮೂಲಕ ಆನೆ ಕಂಟೇನರ್​ ಬಳಿ ಬರುವಂತೆ ಮಾಡಲು  ಸಿಬ್ಬಂದಿ ಶತಪ್ರಯತ್ನ ಮಾಡ್ತಿದ್ದಾರೆ.

Leave a Reply

Your email address will not be published. Required fields are marked *